Sunday, 13 March 2011

  

 ಟಿವಿ ಇಲ್ಲದ ಆ ಕ್ಷಣ 

ಕ್ಷಣ ಕ್ಷಣವೂ ಕಾಯುತಿಹೆ ನಾನು  
ರಂಗಿನ ಪರದೆಯ ಕುಡಿನೋಟಕ್ಕಾಗಿ 
ಸಿಡಿಲಿನಾರ್ಭಟಕೆ, ಮಳೆಯಬ್ಬರಕೆ 
ಕುಸಿದಿರೆ ಕೇಬಲ್ ತಂತಿಯ 
ಆಧಾರ ಕಂಬಗಳು, ಮೊರೆಹೋಗಿದೆ
ಟಿವಿಯು ನಿರ್ಲಿಪ್ತತೆಯ ನೆಲೆಯಾ!

ಹಾಯಾಗಿ ಕುರ್ಚಿಯಲಿ ಮೈಚಲ್ಲಿ 
ಕರಿದಿಟ್ಟ ಕುರುಕುರುಗಳ ಮೇಯುತಲಿ 
ರಿಮೋಟ್ ಕಂಟ್ರೋಲಿನ ಗುಂಡಿಗಳ ಒತ್ತುತಲಿ 
ಚಾನಲಗಳ ಬದಬದಲಾಯಿಸುತ 
ಒಂದೇ ಬಾರಿಗೆ ನೋಡುವ ನಾಲ್ಕು ಸಿನೆಮಾಗಳ 
ಆ ಮಜ(ವನ್ನು) ಕನಸಾಗಿಸಿದೆ ಮಳೆಗಾಲವೆಂಬ ಈ ಸಜ!

No comments:

Post a Comment