Sunday, 13 March 2011

ಆಸೆ

 ಓ ಗಡಿಯಾರದ ಮುಳ್ಳುಗಳೇ....
                ನಿಮ್ಮಂತೆ ನಾನಾಗಬೇಕೆಂಬ ಆಸೆ!

                 ಖಿನ್ನತೆಯ ಜಾಡಲ್ಲಿ, ಆಲಸ್ಯದ ಗೂಡಲ್ಲಿ 
                 ಗುಬ್ಬಿಮರಿಯಾಗಿರುವ ನನಗೆ 
                 ಕ್ಷಣಕಿರುವ ಮಾನ್ಯತೆಯ, ಕಾಯಕದ ಔನ್ನತ್ಯವ 
                 ನಿದರ್ಶಿಸಿರುವೆ ನೀನು....

ಓ ಶ್ವೇತ ಹಂಸಗಳೇ....
                ನಿಮ್ಮಂತೆ ನಾನಾಗಬೇಕೆಂಬ ಆಸೆ!

                ನಿರ್ಲಿಪ್ತ ನೀರಲ್ಲಿ ನಿಮ್ಮ ಚಲನೆ,
                ನೋಡುಗನಿಗೆ ಸಖ್ಯ, ಕಣ್ಣಿಗದು ಆಹ್ಲಾದ 
                ಅದರಡಿಯ ನಿಮ್ಮ ಸತತ ಪರಿಶ್ರಮ 
                ಯಾರಿಗದು ವೇದ್ಯ? ನನಗದುವೆ ಪ್ರಚೋದನೆ....

ಓ ಧುಮ್ಮಿಕ್ಕೋ ಜಲಧಾರೆ......
                 ನಿಮ್ಮಂತೆ ನಾನಾಗಬೇಕೆಂಬ ಆಸೆ!

                 ತನ್ನದೆಂಬ ನಿರ್ದಿಷ್ಟ ಪರಿಧಿಯ ತೊರೆದು 
                 ತನ್ನಿಕ್ಕೆಲವ  ಹಸಿರಾಗಿಸಿ, ಜುಳ ಜುಳನೇ ಹರಿಯೋ ಜಲರಾಶಿ 
                 ಎಲ್ಲ ಎಲ್ಲೆಗಳನು ಮೀರಿ ತನ್ನ ತನವ ಛಾಪಿಸುತ 
                 ವ್ಯಕ್ತಿಗತವಾಗಿ ಬೆಳೆಯಬೇಕೆಂಬಾಸೆಗೆ, ನೀನಾಗಿರುವೆ ನೀರು....
              

2 comments:

  1. Beautiful thoughts!!!

    ಎಲ್ಲ ಎಲ್ಲೆಗಳನು ಮೀರಿ ತನ್ನ ತನವ ಛಾಪಿಸುತ
    ವ್ಯಕ್ತಿಗತವಾಗಿ ಬೆಳೆಯಬೇಕೆಂಬಾಸೆಗೆ... Liked this very much.

    ReplyDelete
  2. Well written intuit, although need ur help to understand the same.. could follow only parts of it!

    ReplyDelete